ಇತ್ತೀಚಿನ ನೇಮಕಾತಿ ಪರೀಕ್ಷೆಗಳಾದಂತಹ ಕೆಪಿಎಸ್ಸಿ ಗ್ರೂಪ್ ಸಿ, ಕೆಇಎ, ಎಸ್ಎಸ್ಸಿ ಮತ್ತು ಇತರ ರಾಷ್ಟ್ರೀಯ ಮಟ್ಟದ . ಸೇರಿದಂತೆ ಅನೇಕ ನೇಮಕಾತಿ ಪರೀಕ್ಷೆಗಳಲ್ಲಿ ಉದ್ಯೋಗ ಆಕಾಂಕ್ಷಿಗಳು ಉತ್ತಮವಾದ ಅಂಕಗಳನ್ನು ಪಡೆದರು ಸಹ ನೇಮಕಾತಿ ಹೊಂದಲು ಸಾಧ್ಯ ಆಗುತ್ತಿಲ್ಲ ಅದಕ್ಕೆ ಕಾರಣ ಎಂದರೆ ಕಂಪ್ಯೂಟರ್ ವಿಷಯದ ಬಗ್ಗೆ ಅವರಿಗೆ ಹಿಡಿತ ಇಲ್ಲದಿರುವುದು. & ಕೇಳುತ್ತಿರುವಂಥ ಪ್ರಶ್ನೆಗಳ ಸ್ವರೂಪ ಅಪ್ಡೇಟ್ ಆಗಿರುವದರಿಂದ ಅಥವಾ ಕಂಪ್ಯೂಟರ್ ವಿಷಯದಲ್ಲಿ ಕಡಿಮೆ ಪ್ರಮಾಣದ ಸ್ಕೋರ್ ಆಗುತ್ತಿರುವುದು.
ಹಾಗಾಗಿ ಈ ಕಂಪ್ಯೂಟರ್ ಕೋರ್ಸ್ ಅನ್ನು ಇದೇ ಉದ್ದೇಶಕ್ಕಾಗಿ ಸಮಗ್ರವಾಗಿ ರೂಪಿಸಲಾಗಿದೆ.
ಸರ್ಕಾರಿ ನೇಮಕಾತಿ ಪರೀಕ್ಷೆಗಳಾದಂತಹ KPSC, KEA, PDO, KAS, GROUP C , SSC, CGL, CHSL, IBPS, RRB ಮತ್ತು RBI ಸಹಾಯಕ ಪರೀಕ್ಷೆಗಳು ಅಥವಾ ಯಾವುದೇ ಇತರ ರಾಜ್ಯ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಿಗೆ, ಸೇರಿ ಅನೇಕ ನೇಮಕಾತಿ ಪರೀಕ್ಷೆಗಳಿಗೆ ಈ ಕಂಪ್ಯೂಟರ್ ಕೋರ್ಸ್ ನಿಮಗೆ ಸಮಗ್ರ ಜ್ಞಾನ ಕೊಡುವುದರ ಜೊತೆಗೆ ಉದ್ಯೋಗ ಆಧಾರಿತ ಹಾಗೂ ಜ್ಞಾನಾಧಾರಿತ ಕೋರ್ಸ್ ಆಗಿರುತ್ತದೆ.
ಈ ಕೋರ್ಸ್ ನಲ್ಲಿ, ಶ್ರೀ, ಆರ್ ಕೆ ಸರ್ ಅವರು ಸಮಗ್ರ ಕಂಪ್ಯೂಟರ್ ಜ್ಞಾನದ ಕೋರ್ಸ್ ಅನ್ನು ಬಹಳಷ್ಟು ಕ್ರಿಯಾತ್ಮಕವಾಗಿ ಚಿತ್ರಗಳೊಂದಿಗೆ ಹಾಗೂ ವಿಡಿಯೋಗಳೊಂದಿಗೆ & ಪ್ರಾಕ್ಟಿಕಲ್ ಆಗಿ ನಿಮಗೆ ಭೋದಿಸುವರು, ಇದೊಂದು ಸಮಗ್ರವಾಗಿರುವಂತಹ ಕಂಪ್ಯೂಟರ್ ಜ್ಞಾನದ ಕೋರ್ಸ್ ಆಗಿದ್ದು ನಿಮ್ಮ ಯಾವುದೇ ನೇಮಕಾತಿ ಪರೀಕ್ಷೆಗಳಲ್ಲಿ ಈ ಕೋರ್ಸ್ ಖಂಡಿತವಾಗಿಯೂ ಸಹಾಯಕವಾಗುತ್ತದೆ.